
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಮಂಜು ಅವರು ಸೌಂದರ್ಯಾ ಶೆಟ್ಟಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ನಿರೂಪಕ ಕಿಚ್ಚ ಸುದೀಪ್ ತೀವ್ರವಾಗಿ ಖಂಡಿಸಿದ್ದಾರೆ.
ಸೌಂದರ್ಯಾ ಬಗ್ಗೆ 'ಕ್ಯಾರೆಕ್ಟರ್ ಇಲ್ಲದವರು' ಎಂದು ಮಂಜ ಆಡಿದ ಮಾತಿನಿಂದ ಸೌಂದರ್ಯಾ ಕಣ್ಣೀರು ಹಾಕಿದ್ದು, ಸುದೀಪ್ ಅವರು ಮಂಜನಿಗೆ ಮಾತಿನ ಮೇಲೆ ನಿಗಾ ಇಡುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಮೊದಲು ಶನಿವಾರದ ಸಂಚಿಕೆಯಲ್ಲಿಯೂ ಸುದೀಪ್ ಅವರು ಸಾಮಾನ್ಯ ಸ್ಪರ್ಧಿಗಳ ವರ್ತನೆಯನ್ನು ಖಾರವಾಗಿ ಪ್ರಶ್ನಿಸಿ ವಾರ್ನಿಂಗ್ ನೀಡಿದ್ದರು.