
ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನ ಸಂಚಾರ ದಟ್ಟಣೆ ಕಡಿಮೆ ಮಾಡಲು ಬಿಡಿಎ 1,130 ಕೋಟಿ ರೂ. ವೆಚ್ಚದ 2.2 ಕಿ.ಮೀ ಉದ್ದದ ಟ್ವಿನ್ ಟನಲ್ ಸುರಂಗ ಮಾರ್ಗ ಯೋಜನೆಗೆ ಚಾಲನೆ ನೀಡಿದೆ.
ಈ ಯೋಜನೆಯನ್ನು ಹೈದರಾಬಾದ್ ಮೂಲದ ರಿಷಿಕ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ಮುಂದಿನ 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಹೆಬ್ಬಾಳ ಜಂಕ್ಷನ್‌ನಿಂದ ಕೆವಿಎಎಫ್‌ಎಸ್‌ಯು ಕ್ಯಾಂಪಸ್‌ವರೆಗೆ ನಿರ್ಮಾಣವಾಗಲಿರುವ ಈ 3 ಪಥಗಳ ಸುರಂಗ ಮಾರ್ಗಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಸರ್ಕಾರ ಯೋಜನೆ ಮುಂದುವರಿಸಿದೆ.