
ಸೂರತ್ ಮೂಲದ ಹರಿ ಕೃಷ್ಣ ಎಕ್ಸ್ಪೋರ್ಟ್ಸ್ ಸಂಸ್ಥಾಪಕ ಸಾವ್ಜಿ ಧೋಲಾಕಿಯಾ ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ವಿನೂತನ ಕಾರ್ಪೊರೇಟ್ ಉಡುಗೊರೆಗಳನ್ನು ನೀಡಿದ್ದಾರೆ.
ಕೇವಲ ಉದ್ಯೋಗಿಗಳಿಗೆ ಕಾರು ಮತ್ತು ಪ್ಲಾಟ್ ನೀಡುವುದಷ್ಟೇ ಅಲ್ಲದೆ, ಅವರ ಪತ್ನಿಯರಿಗೆ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿಯನ್ನು ಮುಂದುವರಿಸಿದ್ದಾರೆ.
ಜತೆಗೆ ಉದ್ಯೋಗಿಗಳ ವೃದ್ಧ ಪೋಷಕರಿಗೆ ಪ್ರತಿ ವರ್ಷ ಪುಣ್ಯಕ್ಷೇತ್ರಗಳ ದರ್ಶನಕ್ಕಾಗಿ ವಿಶೇಷ ತೀರ್ಥಯಾತ್ರೆಗಳನ್ನು ಆಯೋಜಿಸುವ ಮೂಲಕ ಕುಟುಂಬದ ಕಲ್ಯಾಣಕ್ಕೆ ಶ್ರಮಿಸುತ್ತಿದ್ದಾರೆ.