
ಹರಿಯಾಣದ ಕುಸ್ತಿಪಟು ಸುಜೀತ್ ಕಲ್‌ಕಲ್ ಅವರು ಏಷ್ಯನ್ ಗೇಮ್ಸ್‌ನ ಪುರುಷರ 65 ಕೆಜಿ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಫೈನಲ್ ಹಣಾಹಣಿಯಲ್ಲಿ 2–9 ಹಿನ್ನಡೆಯಿಂದ ಚೇತರಿಸಿಕೊಂಡ ಸುಜೀತ್, 10–9ರಿಂದ ತಜಕಿಸ್ತಾನದ ಅಬ್ದುಲ್ ಮಜಿದ್ ಕುದೀವ್ ಅವರನ್ನು ಸದೆಬಡಿದರು.
ಪ್ರಶಸ್ತಿ ಗೆಲ್ಲುವ ಹಾದಿಯಲ್ಲಿ ಅವರು ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಕೊಟಾರೊ ಕಿಯೂಕಾ ಅವರಿಗೂ ಆಘಾತ ನೀಡಿ ಗೆಲುವು ಸಾಧಿಸಿದರು.