
ಇಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಸಂಸ್ಥೆ ಭಾರತದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸಲು ಅನುಮತಿ ಕೋರಿ ಬಾಹ್ಯಾಕಾಶ ನಿಯಂತ್ರಕ ಸಂಸ್ಥೆ IN-SPACe ಗೆ ಅರ್ಜಿ ಸಲ್ಲಿಸಿದೆ.
ಭೂಮಿಯಿಂದ 340-615 ಕಿಮೀ ಎತ್ತರದ ಕಕ್ಷೆಯಲ್ಲಿರುವ ಸುಮಾರು 30,000 ಉಪಗ್ರಹಗಳನ್ನು ಬಳಸಿ 'Gen 2' ತಂತ್ರಜ್ಞಾನದ ಮೂಲಕ ಸೇವೆ ನೀಡಲು ಕಂಪನಿ ಯೋಜನೆ ರೂಪಿಸಿದೆ.
ಈ ಹಿಂದೆ ತಾಂತ್ರಿಕ ಕಾರಣಗಳಿಂದ ಸ್ಟಾರ್‌ಲಿಂಕ್‌ನ ಅರ್ಜಿಯನ್ನು ತಿರಸ್ಕರಿಸಲಾಗಿತ್ತು, ಆದರೆ ಈಗ ನೇರವಾಗಿ ಮೊಬೈಲ್ ಫೋನ್‌ಗಳಿಗೆ ಸಂಪರ್ಕ ಕಲ್ಪಿಸುವ D2D ತಂತ್ರಜ್ಞಾನದೊಂದಿಗೆ ಮರು ಪ್ರಯತ್ನಿಸುತ್ತಿದೆ.