
ಆಗಸ್ಟ್ 5ರಿಂದ ಪುಷ್ಯ ನಕ್ಷತ್ರದಲ್ಲಿ ಸಂಚರಿಸುತ್ತಿರುವ ಗುರುವು, ಕರ್ಕಾಟಕ, ವೃಶ್ಚಿಕ, ಧನು ಮತ್ತು ಮೀನ ರಾಶಿಯವರಿಗೆ ಷೇರು ಮಾರುಕಟ್ಟೆಯಲ್ಲಿ ಭಾರಿ ಆರ್ಥಿಕ ಲಾಭ ತರಲಿದ್ದಾನೆ.
ಬ್ಯಾಂಕಿಂಗ್, ಹಣಕಾಸು, ರಿಯಲ್ ಎಸ್ಟೇಟ್ ಮತ್ತು ಐಟಿ ವಲಯದ ಷೇರುಗಳು ಈ ಅವಧಿಯಲ್ಲಿ ಉತ್ತಮ ರ್ಯಾಲಿಯನ್ನು ಕಾಣಲಿದ್ದು, ಹೂಡಿಕೆದಾರರಿಗೆ ಇದು ಸುವರ್ಣಾವಕಾಶವಾಗಿದೆ.
ಗುರುವು ಸುಮಾರು ಎರಡು ವಾರಗಳ ಕಾಲ ಪುಷ್ಯ ನಕ್ಷತ್ರದಲ್ಲಿ ಇರಲಿದ್ದು, ನಂತರ ಆಶ್ಲೇಷ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ ಎಂದು ಜ್ಯೋತಿಷಿಗಳು ತಿಳಿಸಿದ್ದಾರೆ.