
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮತ್ತು ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಕ್ರಮಗಳ ವಿರುದ್ಧ ಸಿಜೆಐ ಸೂರ್ಯಕಾಂತ್ ಮಧ್ಯಸ್ಥಿಕೆ ಕೋರಿ 'ಇಂಡಿಯಾ' ಒಕ್ಕೂಟದ ನಾಯಕರು ಸೋಮವಾರ ಸುಪ್ರೀಂ ಕೋರ್ಟ್ಗೆ ಪಾದಯಾತ್ರೆ ನಡೆಸಲಿದ್ದಾರೆ.
ಇಂದು ಸಂಜೆ 4 ಗಂಟೆಯ ನಂತರ ಸಿಜೆಐ ಅವರನ್ನು ಭೇಟಿಯಾಗಲಿರುವ ವಿಪಕ್ಷ ನಾಯಕರು ಮತದಾರರ ಪಟ್ಟಿಯ ಅಕ್ರಮ ತಡೆಯಲು ಮತ್ತು ಜ್ಞಾನೇಶ್ ಕುಮಾರ್ ರಾಜೀನಾಮೆ ಕೋರಿ ಮನವಿ ಪತ್ರ ಸಲ್ಲಿಸಲಿದ್ದಾರೆ.
ಈ ಪ್ರತಿಭಟನಾ ಮೆರವಣಿಗೆಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸೇರಿದಂತೆ ಪ್ರಮುಖ ನಾಯಕರು, ನಾಗರಿಕ ಸಮಾಜದ ಗುಂಪುಗಳು ಮತ್ತು ಯುವಕರು ಭಾಗವಹಿಸಲಿದ್ದಾರೆ.