
ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಆಗಸ್ಟ್ 13 ರಿಂದ ಆರಂಭವಾಗಲಿದ್ದು, ಆಸೀಸ್ ವೇಗಿ ಜೋಶ್ ಹೇಜಲ್ವುಡ್ 300 ಟೆಸ್ಟ್ ವಿಕೆಟ್ಗಳ ಮೈಲಿಗಲ್ಲು ತಲುಪುವ ಸನಿಹದಲ್ಲಿದ್ದಾರೆ.
ಪ್ರಸ್ತುತ 76 ಟೆಸ್ಟ್ ಪಂದ್ಯಗಳಿಂದ 295 ವಿಕೆಟ್ ಪಡೆದಿರುವ ಹೇಜಲ್ವುಡ್, ಡಾರ್ವಿನ್ನ ಮರ್ರಾರಾ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ 5 ವಿಕೆಟ್ ಪಡೆದರೆ ಈ ಸಾಧನೆ ಮಾಡಿದ 9ನೇ ಆಸ್ಟ್ರೇಲಿಯಾ ಬೌಲರ್ ಆಗಲಿದ್ದಾರೆ.
ಮತ್ತೊಬ್ಬ ವೇಗಿ ಮಿಚೆಲ್ ಸ್ಟಾರ್ಕ್ ಅವರು ತವರು ನೆಲದಲ್ಲಿ 400 ವಿಕೆಟ್ಗಳನ್ನು ಪೂರೈಸಲು ಕೇವಲ 5 ವಿಕೆಟ್ಗಳ ಅಗತ್ಯವಿದ್ದು, ಕಪಿಲ್ ದೇವ್ ಮತ್ತು ಡೇಲ್ ಸ್ಟೇನ್ ಅವರ ದಾಖಲೆ ಮೀರಿಸುವ ಅವಕಾಶ ಹೊಂದಿದ್ದಾರೆ.