
ದೇಶದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸತತ ಎರಡನೇ ದಿನವೂ ಇಳಿಕೆ ಕಂಡಿದ್ದು, ಬುಧವಾರ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ₹600ರಷ್ಟು ಕುಸಿದು ₹1,31,550ಕ್ಕೆ ತಲುಪಿದೆ.
24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ₹660ರಷ್ಟು ಇಳಿಕೆಯಾಗಿ ₹1,43,510ಕ್ಕೆ ತಲುಪಿದ್ದರೆ, 18 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ ₹500ರಷ್ಟು ಕಡಿಮೆಯಾಗಿ ₹1,07,630 ಆಗಿದೆ.
ಬೆಳ್ಳಿಯ ದರವು ಮಂಗಳವಾರ ₹5,000 ಇಳಿಕೆಯಾದ ನಂತರ ಬುಧವಾರ ಪ್ರತಿ ಕೆಜಿಗೆ ₹2,35,000 ದರದಲ್ಲಿ ಸ್ಥಿರವಾಗಿ ಮುಂದುವರಿದಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.