
ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಅಂಗೀಕರಿಸುವ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಪಕ್ಷವು ಅಡ್ಡಿಪಡಿಸಬಾರದು ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕ್ಷೇತ್ರ ಪುನರ್ವಿಂಗಡಣೆ ವಿಧೇಯಕವು ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು 850ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ ಮತ್ತು ಶೇ. 33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರಲು ಸಾಂವಿಧಾನಿಕವಾಗಿ ಅಗತ್ಯವೆಂದು ಎನ್‌ಡಿಎ ಸರ್ಕಾರ ಪ್ರತಿಪಾದಿಸಿದೆ.
ಮುಂಗಾರು ಅಧಿವೇಶನ ಮುಕ್ತಾಯಗೊಂಡು 64 ದಿನಗಳಾದರೂ ಸಂಸತ್ ಅಧಿವೇಶನ ಮರುಆರಂಭಿಸಿಲ್ಲ ಎಂಬ ಖರ್ಗೆ ಅವರ ಆರೋಪಕ್ಕೆ ಉತ್ತರಿಸಿದ ರಿಜಿಜು, ಅನಿರ್ದಿಷ್ಟಾವಧಿ ಮುಂದೂಡಿಕೆಯ ನಂತರ ಅಧಿವೇಶನ ಮುಕ್ತಾಯಗೊಳಿಸಲು ನಿರ್ದಿಷ್ಟ ಸಾಂವಿಧಾನಿಕ ಬಾಧ್ಯತೆಯಿಲ್ಲ ಎಂದಿದ್ದಾರೆ.