
ಔಷಧಗಳ ಮಾರಾಟದ ಮೇಲೆ ನಿಗಾ ಹೆಚ್ಚಿಸಲು ಔಷಧ ಅಂಗಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸುವ ಪ್ರಸ್ತಾವವನ್ನು ಕೇಂದ್ರ ಆರೋಗ್ಯ ಸಚಿವಾಲಯ ಸಿದ್ಧಪಡಿಸಿದೆ.
ಶೆಡ್ಯೂಲ್ ಎಚ್, ಎಚ್1 ಮತ್ತು ಎಕ್ಸ್ ಔಷಧಗಳ ಅಕ್ರಮ ಮಾರಾಟವನ್ನು ತಡೆಯಲು 1945ರ ಔಷಧ ನಿಯಮಗಳ ತಿದ್ದುಪಡಿಗೆ ಕರಡು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.
ಈ ಪ್ರಸ್ತಾವಿತ ತಿದ್ದುಪಡಿಯ ಕುರಿತು ಪಾಲುದಾರರು ಮತ್ತು ಸಾರ್ವಜನಿಕರಿಂದ ಸಚಿವಾಲಯವು ಆಕ್ಷೇಪ ಹಾಗೂ ಸಲಹೆಗಳನ್ನು ಆಹ್ವಾನಿಸಿದೆ.