
ರಾಜ್ಯದಲ್ಲಿ ಮಳೆ ತಗ್ಗಿದ್ದು, ಸೆಪ್ಟೆಂಬರ್ 6ರಂದು ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 107.58 ಅಡಿ ಮತ್ತು ತುಂಗಭದ್ರಾ ಜಲಾಶಯದ ಮಟ್ಟ 1630.07 ಅಡಿ ದಾಖಲಾಗಿದೆ.
ಕಬಿನಿ ಜಲಾಶಯಕ್ಕೆ 2,743 ಕ್ಯೂಸೆಕ್ ಒಳಹರಿವು ಇದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1798.10 ಅಡಿ ಹಾಗೂ ಆಲಮಟ್ಟಿ ಜಲಾಶಯದ ಮಟ್ಟ 519.58 ಮೀಟರ್ ಇದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ 2858.38 ಅಡಿ ತಲುಪಿದ್ದು, ಮಲಪ್ರಭಾ ಜಲಾಶಯಕ್ಕೆ ಒಳಹರಿವು ಇಲ್ಲದಿದ್ದರೂ 2066.10 ಅಡಿ ನೀರು ಸಂಗ್ರಹವಿದೆ.