
ಗುಜರಾನ್‌ನ ರಾಜ್‌ಕೋಟ್‌ನಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್ ಹಾಗೂ ಟೆಲಿಗ್ರಾಂ ಮೂಲಕ ನಕಲಿ ನೋಟು ಮುದ್ರಿಸುವುದನ್ನು ಕಲಿತಿದ್ದ ತರಕಾರಿ ವ್ಯಾಪಾರಿ ಕಿಶನ್ ಸೋಲಂಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು 216 ನಕಲಿ ₹100 ನೋಟುಗಳು, 3 ನಕಲಿ ₹500 ನೋಟುಗಳು ಹಾಗೂ ಮುದ್ರಣ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಯು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡದೆ ತಾನೇ ಸಣ್ಣಪುಟ್ಟ ವಸ್ತುಗಳನ್ನು ಖರೀದಿಸುವ ಮೂಲಕ ನಕಲಿ ನೋಟುಗಳನ್ನು ಚಲಾವಣೆಗೆ ತಂದಿರುವುದಾಗಿ ಒಪ್ಪಿಕೊಂಡಿದ್ದಾನೆ.