Economy
ಎಫ್‌ಡಿಐ ಹೂಡಿಕೆ ಮಿತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರದ ಚಿಂತನೆ

ಎಫ್‌ಡಿಐ ಹೂಡಿಕೆ ಮಿತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರದ ಚಿಂತನೆ

prajavani2h
THE BRIEF
1

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಯಡಿ ₹15 ಸಾವಿರ ಕೋಟಿವರೆಗಿನ ಪ್ರಸ್ತಾವನೆಗಳಿಗೆ ಸಚಿವಾಲಯಗಳೇ ನೇರವಾಗಿ ಒಪ್ಪಿಗೆ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ.

2

ಪ್ರಸ್ತುತ ₹5 ಸಾವಿರ ಕೋಟಿ ಮಿತಿಯಿರುವ ಈ ಪ್ರಕ್ರಿಯೆಯನ್ನು ವಿಸ್ತರಿಸುವ ಮೂಲಕ ಸುಲಲಿತ ವಹಿವಾಟಿಗೆ ಉತ್ತೇಜನ ನೀಡಲು ಮತ್ತು ದೇಶದಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ.

3

ಪ್ರಧಾನಿ ನೇತೃತ್ವದ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿಯ (ಸಿಸಿಪಿಎ) ಅನುಮೋದನೆ ಇಲ್ಲದೆ ಸಚಿವಾಲಯಗಳೇ ನಿರ್ಧಾರ ಕೈಗೊಳ್ಳುವ ಈ ಹೊಸ ವ್ಯವಸ್ಥೆಯಿಂದ ಹೂಡಿಕೆ ಪ್ರಕ್ರಿಯೆ ವೇಗಗೊಳ್ಳಲಿದೆ.