
ಜಿಯೋಹಾಟ್ಸ್ಟಾರ್ನಲ್ಲಿ ಪ್ರಸಾರವಾಗುತ್ತಿರುವ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ನಾಲ್ಕೂ ಭಾಷೆಗಳ ಬಿಗ್ ಬಾಸ್ ಸೀಸನ್ ಪ್ರಸಾರ ಆರಂಭಿಸಿದ ಕೇವಲ 5 ವಾರಗಳಲ್ಲಿ 550 ಮಿಲಿಯನ್ ವಾಚ್ ಅವರ್ಸ್ ದಾಟಿದೆ.
ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಒಟ್ಟಾರೆ ವಾಚ್ ಟೈಮ್ ಶೇ. 20ರಷ್ಟು ಏರಿಕೆ ಕಂಡಿದೆ ಎಂದು ವರದಿಯಾಗಿದೆ.
ನಾಲ್ಕೂ ಭಾಷೆಗಳ ಆವೃತ್ತಿಗಳಿಗೆ 75ಕ್ಕೂ ಹೆಚ್ಚು ಬ್ರ್ಯಾಂಡ್ಗಳು ಕೈಜೋಡಿಸಿದ್ದು, ಒಟ್ಟು 120ಕ್ಕೂ ಅಧಿಕ ಸ್ಪಾನ್ಸರ್ಶಿಪ್ಗಳು ದಾಖಲಾಗಿವೆ.