
2026ರ ಕಾಮನ್‌ವೆಲ್ತ್ ಗೇಮ್ಸ್‌ನ 8ನೇ ದಿನ ಮಹಿಳೆಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಸೀಮಾ ಕಲಿರಾಮನ್ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳ ಸಂಖ್ಯೆಯನ್ನು 17ಕ್ಕೆ ಏರಿಸಿದ್ದಾರೆ.
ಸೀಮಾ ಕಲಿರಾಮನ್ ಅವರು 58.65 ಮೀಟರ್ ದೂರ ಡಿಸ್ಕಸ್ ಎಸೆಯುವ ಮೂಲಕ ಈ ಸಾಧನೆ ಮಾಡಿದ್ದು, ಇದೇ ಸ್ಪರ್ಧೆಯಲ್ಲಿ ನಿಧಿ ರಾಣಿ 57.10 ಮೀಟರ್ ಎಸೆದು ನಾಲ್ಕನೇ ಸ್ಥಾನ ಪಡೆದಿದ್ದಾರೆ.
ಹರಿಯಾಣ ಮೂಲದ ಸೀಮಾ ಅವರ ಪತಿ ರವೀಂದರ್ ಅವರೇ ತರಬೇತುದಾರರಾಗಿದ್ದು, ಕಳೆದ ತಿಂಗಳು ನಡೆದ ಅಂತರ-ರಾಜ್ಯ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಸೀಮಾ 59.73 ಮೀಟರ್ ಎಸೆದು ದಾಖಲೆ ನಿರ್ಮಿಸಿದ್ದರು.