
ಪಾಕಿಸ್ತಾನ ಮತ್ತು ಐಸಿಸ್ ಸಂಘಟನೆಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಎಟಿಎಸ್ ತಂಡವು ಕಲಬುರಗಿಯಲ್ಲಿ ಮೊಹಮ್ಮದ್ ಸಮೀರ್ ಮತ್ತು ಸಲ್ಮಾನ್ ಎಂಬ ಇಬ್ಬರನ್ನು ವಶಕ್ಕೆ ಪಡೆದಿದೆ.
ಆರೋಪಿಗಳು ಮಾಲಗತ್ತಿ ಮತ್ತು ಉಪಳಾಂವ್ ಗ್ರಾಮದ ಹೊರವಲಯದಲ್ಲಿರುವ ಮಾಂಸ ರಫ್ತು ಮಾಡುವ ಫೇರ್ ಎಕ್ಸ್ ಪೋರ್ಟ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಸಮೀರ್‌ನ ಕೊಠಡಿಯಲ್ಲಿ ಕೆಲವು ಮ್ಯಾಪ್‌ಗಳು ಪತ್ತೆಯಾಗಿವೆ.
ಬಿಎನ್ಎಸ್ ಕಾಯ್ದೆ 113(3)197ರಡಿ ಕಲಬುರಗಿಯ ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಮೂಲಕ ಪಾಕಿಸ್ತಾನದ ಫೇಸ್‌ಬುಕ್ ಖಾತೆಗಳ ಜೊತೆ ಸಮೀರ್ ಸಂಪರ್ಕದಲ್ಲಿದ್ದದ್ದು ದೃಢಪಟ್ಟಿದೆ.