
ರೋಮಾಂಚಕಂ ಚಿತ್ರದ ಸೋಲಿಗೆ ವಿಮರ್ಶಕರ ನೆಗೆಟಿವ್ ರಿವ್ಯೂಗಳೇ ಕಾರಣ ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ ಸಹೋದರ ಹಾಗೂ ನಿರ್ಮಾಪಕ ಪ್ರಣಯ್ ರೆಡ್ಡಿ ವಂಗಾ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಚಿತ್ರ ನಿರ್ಮಾಣದ ಕಷ್ಟಗಳು ವಿಮರ್ಶಕರಿಗೆ ಅರ್ಥವಾಗುವುದಿಲ್ಲ ಎಂದ ಅವರು, ಸಣ್ಣ ಸಿನಿಮಾವಾದುದರಿಂದ ಅದನ್ನು ಸುಲಭವಾಗಿ ತುಳಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಂದಿನ ಬಿಗ್ ಬಜೆಟ್ ಚಿತ್ರ 'ಸ್ಪಿರಿಟ್' ಬಿಡುಗಡೆಯಾದಾಗ ತಮ್ಮ ಸಾಮರ್ಥ್ಯ ತೋರಿಸುವಂತೆ ಅವರು ವಿಮರ್ಶಕರಿಗೆ ಬಹಿರಂಗ ಸವಾಲು ಹಾಕಿದ್ದಾರೆ.