
ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿಗೆ ಯುನೆಸ್ಕೋ ತಂಡವು ಭೇಟಿ ನೀಡಿ ಕಳೆದ ಮೂರು ದಿನಗಳಿಂದ ಐತಿಹಾಸಿಕ ತಾಣಗಳನ್ನು ಪರಿಶೀಲಿಸುತ್ತಿದೆ.
ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯ ವಿಠಲ ಮಂದಿರ ಮತ್ತು ಕಲ್ಲಿನ ರಥ ಮುಂತಾದ ತಾಣಗಳನ್ನು ವೀಕ್ಷಿಸಿರುವ ತಂಡವು ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಿದೆ.
ಪ್ರವಾಸಿಗರು ಮತ್ತು ಮಾರ್ಗದರ್ಶಕರಿಂದ ಶೌಚಾಲಯ ಹಾಗೂ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸಲ್ಲಿಕೆಯಾದ ದೂರುಗಳ ಬಗ್ಗೆಯೂ ತಂಡವು ಅಧ್ಯಯನ ನಡೆಸಿದೆ.