
ಕರ್ನಾಟಕದಲ್ಲಿ ಶಿಕ್ಷಕರ ಕೊರತೆ ನಿವಾರಿಸಲು ಡಿಸೆಂಬರ್ ತಿಂಗಳೊಳಗೆ 17,000 ಶಿಕ್ಷಕರ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ಹೋರಾಡಿ ಹಿಂದಿನ ಸರ್ಕಾರದಿಂದ ಬಾಕಿ ಉಳಿದಿದ್ದ 13,500 ಶಿಕ್ಷಕರ ನೇಮಕಾತಿಯನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಇದರೊಂದಿಗೆ ಅನುದಾನಿತ ಶಾಲೆಗಳಿಗೆ 6,000 ಶಿಕ್ಷಕರನ್ನು ನೇಮಿಸಲು ಅನುಮತಿ ದೊರೆತಿದ್ದು, ಈ ಪ್ರಕ್ರಿಯೆಯೂ ಡಿಸೆಂಬರ್ ಅಥವಾ ಜನವರಿ ವೇಳೆಗೆ ಅಂತ್ಯಗೊಳ್ಳಲಿದೆ.