
ಇರಾನ್ ವಿರುದ್ಧದ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ತಕ್ಷಣದ ಒಪ್ಪಂದಕ್ಕೆ ಸಮ್ಮತಿಸಿದರೆ ದಾಳಿ ನಡೆಸದಿರಲು ಅಮೆರಿಕ ಮತ್ತು ಇಸ್ರೇಲ್ ನಿರ್ಧರಿಸಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಫೆಬ್ರವರಿ 28ರಂದು ಆರಂಭವಾದ ಯುದ್ಧ ಐದು ತಿಂಗಳು ಕಳೆದಿದ್ದು, ಇರಾನ್ನ ಅಣ್ವಸ್ತ್ರ ಬೆದರಿಕೆಗೆ ಅಂತ್ಯ ಮತ್ತು ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದು ಒಪ್ಪಂದದ ಪ್ರಮುಖ ಷರತ್ತುಗಳಾಗಿವೆ.
ಇರಾನ್ ಹಾಗೂ ಇತರ ಮಧ್ಯಪ್ರಾಚ್ಯ ದೇಶಗಳ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇಸ್ರೇಲ್ ಕೂಡ ಈ ಶಾಂತಿ ಒಪ್ಪಂದದ ಬದ್ಧತೆಗೆ ಕೈಜೋಡಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.