
ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ವೇಳೆ ಜೆಡಿಎಸ್ ಐಟಿ ವಿಂಗ್‌ನವರಿಗೆ ಪೊಲೀಸರು ತೊಂದರೆ ಕೊಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ವಕ್ತಾರ ಪ್ರದೀಪ್ ಗಂಭೀರ ಆರೋಪ ಮಾಡಿದ್ದಾರೆ.
ಜೆಡಿಎಸ್ ಐಟಿ ವಿಂಗ್‌ನ ಮೋಹನ್ ಅವರ ಮನೆಗೆ ರಾತ್ರಿ ವೇಳೆ ನುಗ್ಗಿದ ಪೊಲೀಸರು ಅವರ ಪತ್ನಿ ಪವಿತ್ರಾ ಅವರ ಮೇಲೆ ದೌರ್ಜನ್ಯ ನಡೆಸಿ ಮೊಬೈಲ್ ಹಾಗೂ ಪೆನ್ ಡ್ರೈವ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ವಿಚಾರವಾಗಿ ಗೃಹಮಂತ್ರಿಗಳಿಗೆ ಸವಾಲು ಹಾಕಿರುವ ಅವರು, ತಪ್ಪಿತಸ್ಥರಿದ್ದರೆ ಬಂಧಿಸಲಿ ಇಲ್ಲವಾದರೆ ಜನರ ಮುಂದೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.