
ಬಾಗಲಕೋಟೆಯ ಸಿದ್ದನಕೊಳ್ಳ ಶ್ರೀಮಠಕ್ಕೆ ಭೇಟಿ ನೀಡಿದ ಸಚಿವ ವಿಜಯಾನಂದ ಕಾಶಪ್ಪನವರ್ ಅವರಿಗೆ, ತಮ್ಮ ಕೋಪವನ್ನು ತ್ಯಾಗ ಮಾಡಿದರೆ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುತ್ತೀರಿ ಎಂದು ಶಿವಕುಮಾರ ಸ್ವಾಮೀಜಿ ಆಶೀರ್ವದಿಸಿದ್ದಾರೆ.
2023ರಲ್ಲಿ ಸಚಿವರಾಗುತ್ತೀರಿ ಎಂದು ಶ್ರೀಗಳು ನುಡಿದಿದ್ದ ಭವಿಷ್ಯ 2026ರಲ್ಲಿ ನಿಜವಾಗಿದ್ದು, ಇದೀಗ ಸಿಎಂ ಆಗುವ ಕುರಿತಾದ ಹೊಸ ಭವಿಷ್ಯ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಸಚಿವರಿಗೆ ಎಚ್ಚರಿಕೆ ನೀಡಿದ ಸ್ವಾಮೀಜಿ, ಸಿಎಂ ಹುದ್ದೆಯ ಹಾದಿ ಸುಲಭವಲ್ಲ, ಜನಸಾಮಾನ್ಯರ ನಿರೀಕ್ಷೆಗಳ ನಡುವೆ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಕಿವಿಮಾತು ಹೇಳಿದ್ದಾರೆ.