
ಭಾರತೀಯ ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಂಗಳು) 2024-25ರ ಆರ್ಥಿಕ ವರ್ಷದಲ್ಲಿ ಒಟ್ಟಾರೆಯಾಗಿ 2,701 ಕೋಟಿ ರೂ. ನಿವ್ವಳ ಲಾಭ ದಾಖಲಿಸಿ ಹೊಸ ದಾಖಲೆ ಬರೆದಿವೆ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ತಿಳಿಸಿದೆ.
ಕೇಂದ್ರ ವಿದ್ಯುತ್ ಸಚಿವ ಮನೋಹರ್ ಲಾಲ್ ಹರ್ಷ ವ್ಯಕ್ತಪಡಿಸಿದ್ದು, 2023-24ರಲ್ಲಿ 25,553 ಕೋಟಿ ರೂ. ಹಾಗೂ 2013-14ರಲ್ಲಿ 67,962 ಕೋಟಿ ರೂ. ನಷ್ಟದಲ್ಲಿದ್ದ ಈ ವಲಯಕ್ಕೆ ಇದು ಪ್ರಮುಖ ಮೈಲಿಗಲ್ಲಾಗಿದೆ.
ಆರ್ಡಿಎಸ್ಎಸ್, ಸ್ಮಾರ್ಟ್ ಮೀಟರಿಂಗ್ ತಂತ್ರಜ್ಞಾನ ಮತ್ತು ಪಾರದರ್ಶಕ ದರ ನೀತಿಗಳಿಂದಾಗಿ 2013-14ರಲ್ಲಿ ಶೇ 22.62ರಷ್ಟಿದ್ದ ತಾಂತ್ರಿಕ ಹಾಗೂ ವಾಣಿಜ್ಯ ನಷ್ಟವು 2024-25ರ ವೇಳೆಗೆ ಶೇ 15.04ಕ್ಕೆ ಕುಸಿದಿದೆ.