
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ‘ಪ್ರೈಮ್ ವೀಡಿಯೋ’ ಒಟಿಟಿಯ ‘ಅಲೈಯನ್ಸ್’ ರಿಯಾಲಿಟಿ ಶೋ ಸಂಚಿಕೆಯಲ್ಲಿ ಅತಿಥಿಯಾಗಿ ಆಗಮಿಸಿ ತಮ್ಮ ಜೈಲು ದಿನಗಳ ಕಠಿಣ ಅನುಭವ ಹಂಚಿಕೊಂಡಿದ್ದಾರೆ.
ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ 1998ರಲ್ಲಿ 3 ದಿನ, 2006ರಲ್ಲಿ 6 ದಿನ, 2007ರಲ್ಲಿ 6 ದಿನ ಹಾಗೂ 2018ರಲ್ಲಿ 2 ದಿನಗಳ ಕಾಲ ಕಸ್ಟಡಿಯಲ್ಲಿದ್ದರು.
ಶೋನ ಪ್ರೋಮೋದಲ್ಲಿ ಸಲ್ಮಾನ್ ಖಾನ್, ಜೈಲಿನಲ್ಲಿ 50ರಿಂದ 70 ಜನರು ಒಂದೇ ಇಂಡಿಯನ್ ಶೈಲಿಯ ಶೌಚಾಲಯ ಬಳಸಬೇಕಿತ್ತು ಮತ್ತು ಅಲ್ಲಿ ಪಲ್ಲಿಗಳಿರುತ್ತಿದ್ದವು ಎಂದು ವಿವರಿಸಿದ್ದಾರೆ.