
ದೆಹಲಿಯ 'ಭಾರತ ಮಂಟಪ'ದಲ್ಲಿ ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನವದೆಹಲಿಗೆ ಆಗಮಿಸಿ ಐಟಿಸಿ ಮೌರ್ಯ ಹೋಟೆಲ್ನಲ್ಲಿ ಉಳಿದುಕೊಂಡಿದ್ದಾರೆ.
ಪುಟಿನ್ ವಿದೇಶಿ ಪ್ರವಾಸಗಳ ವೇಳೆ ಸ್ಥಳೀಯ ಊಟ ತಿನ್ನದೆ, ರಷ್ಯಾದಿಂದಲೇ ತಮ್ಮ ಸ್ವಂತ ಬಾಣಸಿಗರು ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಪ್ರಯಾಣಿಸಿ ಪ್ರತ್ಯೇಕವಾಗಿ ಆಹಾರ ತಯಾರಿಸಿಕೊಳ್ಳುತ್ತಾರೆ.
ಅವರ ಭದ್ರತೆಗಾಗಿ 4 ಹಂತದ ವ್ಯವಸ್ಥೆ ಇದ್ದು, ಪ್ರತಿಯೊಂದು ಖಾದ್ಯವನ್ನು ಅಧಿಕೃತ ಆಹಾರ ಪರೀಕ್ಷಕರು ಮೊದಲು ಸೇವಿಸಿ ಪರೀಕ್ಷಿಸಿದ ನಂತರವೇ ಬಡಿಸಲಾಗುತ್ತದೆ.