
'ಬಿಗ್ ಬಾಸ್ ಕನ್ನಡ ಸೀಸನ್ 13' ಮನೆಯಲ್ಲಿ ಈ ವಾರದ ಕ್ಯಾಪ್ಟನ್ಸಿ ಪಟ್ಟಕ್ಕಾಗಿ ಬಲಶಾಲಿ ಸ್ಪರ್ಧಿಗಳಾದ ತಾಂಡವ್ ಹಾಗೂ ಜಗದೀಶ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.
ಬಲೆಗಳನ್ನು ಉರುಳಿಸಿ ರಿಂಗ್ಗಳನ್ನು ಸಂಗ್ರಹಿಸಿ ನಿಗದಿತ ಬೋರ್ಡ್ನ ಕೊಕ್ಕೆಗೆ ಎಸೆಯುವ ಕಠಿಣ ಹಾಗೂ ರೋಚಕ ಸವಾಲಿನ ಟಾಸ್ಕ್ ಅನ್ನು ಬಿಗ್ ಬಾಸ್ ಸ್ಪರ್ಧಿಗಳಿಗೆ ನೀಡಿದ್ದಾರೆ.
ಹೆಚ್ಚು ರಿಂಗ್ಗಳನ್ನು ಕೊಕ್ಕೆಗೆ ಸಿಕ್ಕಿಸಿ ಮನೆಯ ಮುಂದಿನ ಕ್ಯಾಪ್ಟನ್ ಯಾರೆಂಬುದು ಶನಿವಾರ ರಾತ್ರಿ 9:30ರ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.