
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಬಿಡದಿಯ ನಲ್ಲಿಗುಡ್ಡೆ ಕೆರೆಯನ್ನು ಜಲಕ್ರೀಡೆಗಳ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗಿದ್ದು, ಇಲ್ಲಿ ಕಯಾಕಿಂಗ್, ಸ್ಪೀಡ್ ಬೋಟಿಂಗ್ ಸೇರಿದಂತೆ ಅನೇಕ ಸಾಹಸಮಯ ಆಟಗಳಿಗೆ ಅವಕಾಶವಿದೆ.
ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಈ ಜಲಕ್ರೀಡೆಗಳನ್ನು ಆರಂಭಿಸಲಾಗಿದ್ದು, ವಾರಾಂತ್ಯದಲ್ಲಿ ಕುಟುಂಬದೊಂದಿಗೆ ಒಂಡೇ ಟ್ರಿಪ್ ಕೈಗೊಳ್ಳಲು ರಾಜಧಾನಿಯ ಜನರಿಗೆ ಇದು ಅತ್ಯುತ್ತಮ ತಾಣವಾಗಿದೆ.
ನೂರಾರು ಹೆಕ್ಟೇರ್ನಲ್ಲಿ ಹರಡಿರುವ ಈ ಕೆರೆಯ ದಂಡೆ ಪ್ರಕೃತಿ ಪ್ರಿಯರಿಗೆ ಹಾಗೂ ಸೋಶಿಯಲ್ ಮೀಡಿಯಾ ರೀಲ್ಸ್ ತಯಾರಕರಿಗೆ ನೆಚ್ಚಿನ ತಾಣವಾಗಿ ಹೊರಹೊಮ್ಮುತ್ತಿದೆ.