ಭುವನೇಶ್ವರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜೂನಿಯರ್ ಈಜು ಚಾಂಪಿಯನ್ಷಿಪ್ನ ಐದನೇ ದಿನ ಕರ್ನಾಟಕದ ಈಜುಪಟುಗಳು ಎಂಟು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಮೋನಿಶ್ ಪಿ.ವಿ., ಡೇನಿಯಲ್ ಪಾಲ್, ಶರಣ್ ಎಸ್., ಯಶಸ್ ಎಸ್.ಪಾಲ್, ರುಜುಲಾ ಎಸ್. ಮತ್ತು ತನಿಶಿ ಗುಪ್ತಾ ಅವರು ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಬಾಚಿಕೊಂಡಿದ್ದಾರೆ.
ಒಟ್ಟು 33 ಚಿನ್ನ, 20 ಬೆಳ್ಳಿ ಮತ್ತು 13 ಕಂಚಿನ ಪದಕಗಳೊಂದಿಗೆ ಕರ್ನಾಟಕ ತಂಡವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.