
ಜಾಗತಿಕ ಶ್ರೇಷ್ಠತೆಯ ಎಲೆಕ್ಟ್ರಾನಿಕ್ಸ್ ಕಂಪನಿ ಕಟ್ಟುವ ನಿಟ್ಟಿನಲ್ಲಿ ನಥಿಂಗ್ ಸಂಸ್ಥೆಯಿಂದ CMF ಬ್ರ್ಯಾಂಡ್ ಅನ್ನು ಪ್ರತ್ಯೇಕಿಸಿ ಭಾರತೀಯ ಮಾಲೀಕತ್ವದ ಸ್ವತಂತ್ರ ಕಂಪನಿಯನ್ನಾಗಿ ಮಾಡಲಾಗುತ್ತಿದೆ ಎಂದು ಸಿಇಒ ಕಾರ್ಲ್ ಪೇ ತಿಳಿಸಿದ್ದಾರೆ.
CMF ಇನ್ನು ಮುಂದೆ ಲಂಡನ್ ಕಂಪನಿಯ ಭಾಗವಾಗಿರದೆ ಭಾರತದಲ್ಲೇ ನೋಂದಾಯಿತಗೊಂಡು, ಪ್ರಧಾನ ಕಚೇರಿಯನ್ನು ಹೊಂದಿರಲಿದ್ದು ಬಹುಪಾಲು ಷೇರುಗಳು ಭಾರತೀಯರ ಕೈಲಿರಲಿವೆ.
ವರ್ಷಕ್ಕೆ ಕನಿಷ್ಠ 10 ಕೋಟಿ ಸ್ಮಾರ್ಟ್ಫೋನ್ ಮಾರಾಟ ಮಾಡುವ ಬೃಹತ್ ಗುರಿಯನ್ನು ಸಾಧಿಸಲು ಭಾರತವೇ ಅತ್ಯಂತ ಸೂಕ್ತ ಮಾರುಕಟ್ಟೆಯಾಗಿದೆ ಎಂದು ಅವರು ವಿವರಿಸಿದರು.