
ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ದೇಶಾದ್ಯಂತ 11,403 ಕಸ್ಟಮರ್ ಸರ್ವಿಸ್ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕದಲ್ಲಿ 1,414 ಹುದ್ದೆಗಳಿವೆ.
ಅರ್ಜಿ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನಾಂಕವಾಗಿದ್ದು, ಪ್ರಿಲಿಮಿನರಿ ಪರೀಕ್ಷೆ ಅಕ್ಟೋಬರ್ 10 ಮತ್ತು 11ರಂದು ಹಾಗೂ ಮುಖ್ಯ ಪರೀಕ್ಷೆ ಡಿಸೆಂಬರ್ 27ರಂದು ನಡೆಯಲಿದೆ.
ಪದವಿ ಪೂರ್ಣಗೊಳಿಸಿದ 20 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ibps.in ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಸಾಮಾನ್ಯ ವರ್ಗದವರಿಗೆ 850 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ.