Health & Environment
ನಕಲಿ ಕಾಸ್ಮೆಟಿಕ್ಸ್ ವಿರುದ್ಧ ಆರೋಗ್ಯ ಇಲಾಖೆ ದಾಳಿ

ನಕಲಿ ಕಾಸ್ಮೆಟಿಕ್ಸ್ ವಿರುದ್ಧ ಆರೋಗ್ಯ ಇಲಾಖೆ ದಾಳಿ

tv9kannada2h
THE BRIEF
1

ರಾಜ್ಯದಲ್ಲಿ ಹೆಚ್ಚುತ್ತಿರುವ ನಕಲಿ ಸೌಂದರ್ಯವರ್ಧಕಗಳ ಹಾವಳಿಗೆ ಬ್ರೇಕ್ ಹಾಕಲು ಆಹಾರ ಮತ್ತು ಔಷಧ ಆಡಳಿತ ಇಲಾಖೆ ಬೆಂಗಳೂರು ಸೇರಿದಂತೆ 50ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ ನಡೆಸಿದೆ.

2

ವೈಟ್ನಿಂಗ್ ಕ್ರೀಮ್, ಲಿಪ್‌ಸ್ಟಿಕ್ ಮತ್ತು ಹೇರ್ ಡೈ ಸೇರಿದಂತೆ 19ಕ್ಕೂ ಹೆಚ್ಚು ಬ್ರ್ಯಾಂಡ್‌ಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದ್ದು, ಇವುಗಳಲ್ಲಿ ಮರ್ಕ್ಯುರಿ ಮತ್ತು ಲೆಡ್ ಅಂಶಗಳಿರುವ ಶಂಕೆ ವ್ಯಕ್ತವಾಗಿದೆ.

3

ಲ್ಯಾಬ್ ವರದಿ ಬಂದ ನಂತರ ನಕಲಿ ಉತ್ಪನ್ನ ಮಾರಾಟಗಾರರ ವಿರುದ್ಧ ಲೈಸೆನ್ಸ್ ರದ್ದು, ದಂಡ ಮತ್ತು ಕ್ರಿಮಿನಲ್ ಕೇಸ್ ದಾಖಲಿಸಲು ಇಲಾಖೆ ಸಿದ್ಧತೆ ನಡೆಸಿದೆ.