
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ವಿಶ್ವಾಸಾರ್ಹತೆ ಹೆಚ್ಚಿಸಲು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ ಅವರು 600 ತಜ್ಞರನ್ನು ವಜಾಗೊಳಿಸಿ ತಂಡವನ್ನು ಪುನಾರಚಿಸಲು ಆದೇಶಿಸಿದ್ದಾರೆ.
ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ನಾಲ್ಕು ಹಂತದ ಪ್ರಶ್ನೆಪತ್ರಿಕೆ ತಪಾಸಣೆ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಕಚೇರಿ ಭದ್ರತೆಗೆ ಸಿಐಎಸ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
ಆಡಳಿತವನ್ನು ಚುರುಕುಗೊಳಿಸಲು ಮುಂದಿನ ಕೆಲವೇ ದಿನಗಳಲ್ಲಿ 20 ರಿಂದ 25 ಹೊಸ ಉನ್ನತ ಅಧಿಕಾರಿಗಳನ್ನು ಎನ್‌ಟಿಎಗೆ ನೇಮಕ ಮಾಡಿಕೊಳ್ಳಲು ಸಚಿವಾಲಯ ನಿರ್ಧರಿಸಿದೆ.