
ಬಾಲಿವುಡ್ ನಟ, ನಿರ್ಮಾಪಕ ತುಷಾರ್ ಕಪೂರ್ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯನೆಂದು ಹೇಳಿಕೊಂಡ ವ್ಯಕ್ತಿಯೊಬ್ಬರಿಂದ 5 ಕೋಟಿ ರೂ. ಸುಲಿಗೆ ಬೆದರಿಕೆ ಕರೆ ಬಂದಿದೆ.
ಹ್ಯಾರಿ ಬಕ್ಸರ್ ಎಂಬ ಹೆಸರಿನಲ್ಲಿ ಕರೆ ಮಾಡಲಾಗಿದ್ದು, ಹಣ ಕೊಡದಿದ್ದಲ್ಲಿ ಜೀವ ತೆಗೆಯುವುದಾಗಿ ಬೆದರಿಕೆ ಹಾಕಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಬಿಷ್ಣೋಯ್ ಗ್ಯಾಂಗ್ನ ನೇರ ಭಾಗಿಯಾಗಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿದ್ದು, ಅಪರಿಚಿತ ವ್ಯಕ್ತಿ ಗ್ಯಾಂಗ್ನ ಸದಸ್ಯನಂತೆ ನಟಿಸಿರಬಹುದು ಎಂದು ಶಂಕಿಸಿದ್ದಾರೆ.