
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ತದಡಿ ಮೀನುಗಾರಿಕಾ ಬಂದರಿನಲ್ಲಿ ಬೋಟ್‌ನ ಮೀನು ಸಂಗ್ರಹಣಾ ಕೊಠಡಿ ಸ್ವಚ್ಛಗೊಳಿಸುವ ವೇಳೆ ಉಸಿರುಗಟ್ಟಿ ಮೂವರು ಮೀನುಗಾರರು ಸಾವನ್ನಪ್ಪಿದ್ದಾರೆ.
ಮೃತರನ್ನು ನೌಶಾದ್ (೪೮), ಅಮೀನ್ (೪೦) ಹಾಗೂ ಅಮನ್ (೨೬) ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.
ಕೊಳೆತ ಮೀನಿನ ಚರಂಡಿ ಮತ್ತು ರಸಾಯನಿಕಗಳಿಂದ ರೂಪುಗೊಂಡ ತೀವ್ರ ವಿಷಕಾರಿ ಅನಿಲ ಹಾಗೂ ದುರ್ವಾಸನೆಯಿಂದ ಈ ದುರ್ಘಟನೆ ಸಂಭವಿಸಿದ್ದು, ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.