Sports
ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್: ಭಾರತಕ್ಕೆ ಎರಡು ಚಿನ್ನ ಸೇರಿದಂತೆ ಐದು ಪದಕ

ವಿಶ್ವ ಪ್ಯಾರಾ ಆರ್ಚರಿ ಚಾಂಪಿಯನ್‌ಶಿಪ್: ಭಾರತಕ್ಕೆ ಎರಡು ಚಿನ್ನ ಸೇರಿದಂತೆ ಐದು ಪದಕ

prajavani1h
THE BRIEF
1

ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಪ್ಯಾರಾ ಸರಣಿಯ ಮೂರನೇ ಹಂತದಲ್ಲಿ ಭಾರತದ ಬಿಲ್ಗಾರರು ಮಂಗಳವಾರ ಎರಡು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆದ್ದುಕೊಂಡಿದ್ದಾರೆ.

2

ಪುರುಷರ ಕಾಂಪೌಂಡ್ ಟೀಮ್ ವಿಭಾಗದಲ್ಲಿ ತೋಮನ್ ಕುಮಾರ್ ಮತ್ತು ಶ್ಯಾಮ್ ಸುಂದರ್ ಸ್ವಾಮಿ ಜೋಡಿ 152-139 ಅಂತರದಿಂದ ಇರಾನ್ ತಂಡವನ್ನು ಸೋಲಿಸಿದರೆ, ರಿಕರ್ವ್ ವಿಭಾಗದಲ್ಲಿ ಹರವೀಂದರ್ ಸಿಂಗ್ ಮತ್ತು ವಿಜಯ್ ಸುಂಡೀ ಜೋಡಿ 6-2 ಅಂತರದಿಂದ ಸ್ಲೊವಾಕಿಯಾವನ್ನು ಮಣಿಸಿತು.

3

ಮಹಿಳೆಯರ ರಿಕರ್ವ್ ಟೀಮ್ ವಿಭಾಗದಲ್ಲಿ ಭಾವನಾ ಮತ್ತು ಪೂಜಾ ಜೋಡಿ ರಜತ ಪದಕ ಪಡೆದರೆ, ಸ್ವಾತಿ ಚೌಧರಿ ಮತ್ತು ಮೊಹಮದ್ ನಜೀರ್ ಅನ್ಸಾರಿ ಮಿಶ್ರ ತಂಡ ವಿಭಾಗದಲ್ಲಿ ಬೆಳ್ಳಿ ಹಾಗೂ ಸ್ವಾತಿ ವೈಯಕ್ತಿಕವಾಗಿ ಕಂಚಿನ ಪದಕ ಗೆದ್ದರು.