
ಅಹಮದಾಬಾದ್ನಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಪ್ಯಾರಾ ಸರಣಿಯ ಮೂರನೇ ಹಂತದಲ್ಲಿ ಭಾರತದ ಬಿಲ್ಗಾರರು ಮಂಗಳವಾರ ಎರಡು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಸೇರಿದಂತೆ ಒಟ್ಟು ಐದು ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಪುರುಷರ ಕಾಂಪೌಂಡ್ ಟೀಮ್ ವಿಭಾಗದಲ್ಲಿ ತೋಮನ್ ಕುಮಾರ್ ಮತ್ತು ಶ್ಯಾಮ್ ಸುಂದರ್ ಸ್ವಾಮಿ ಜೋಡಿ 152-139 ಅಂತರದಿಂದ ಇರಾನ್ ತಂಡವನ್ನು ಸೋಲಿಸಿದರೆ, ರಿಕರ್ವ್ ವಿಭಾಗದಲ್ಲಿ ಹರವೀಂದರ್ ಸಿಂಗ್ ಮತ್ತು ವಿಜಯ್ ಸುಂಡೀ ಜೋಡಿ 6-2 ಅಂತರದಿಂದ ಸ್ಲೊವಾಕಿಯಾವನ್ನು ಮಣಿಸಿತು.
ಮಹಿಳೆಯರ ರಿಕರ್ವ್ ಟೀಮ್ ವಿಭಾಗದಲ್ಲಿ ಭಾವನಾ ಮತ್ತು ಪೂಜಾ ಜೋಡಿ ರಜತ ಪದಕ ಪಡೆದರೆ, ಸ್ವಾತಿ ಚೌಧರಿ ಮತ್ತು ಮೊಹಮದ್ ನಜೀರ್ ಅನ್ಸಾರಿ ಮಿಶ್ರ ತಂಡ ವಿಭಾಗದಲ್ಲಿ ಬೆಳ್ಳಿ ಹಾಗೂ ಸ್ವಾತಿ ವೈಯಕ್ತಿಕವಾಗಿ ಕಂಚಿನ ಪದಕ ಗೆದ್ದರು.