
ಮತದಾರರ ಪಟ್ಟಿಯ ಎಸ್‌ಐಆರ್ ಪರಿಷ್ಕರಣೆ ವೇಳೆ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಮತ್ತು ಕೇಂದ್ರ ಸಚಿವ ಎಸ್. ಜೈಶಂಕರ್ ಸೇರಿದಂತೆ 33.13 ಲಕ್ಷ ಜನರಿಗೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿಯಾಗಿದೆ.
98 ವರ್ಷದ ಅಡ್ವಾಣಿ ಹಾಗೂ ಅವರ ಕುಟುಂಬದವರ ಹೆಸರು 2002ರ ಎಸ್‌ಐಆರ್ ಪಟ್ಟಿಯೊಂದಿಗೆ ಲಿಂಕ್ ಆಗದ ಕಾರಣ ಈ ನೋಟಿಸ್ ನೀಡಲಾಗಿದ್ದು, ಉನ್ನತ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಈ ಪಟ್ಟಿಯಲ್ಲಿದ್ದಾರೆ.
ನೋಟಿಸ್ ಬಂದ ಕೂಡಲೇ ಯಾರ ಹೆಸರನ್ನೂ ಪಟ್ಟಿಯಿಂದ ತೆಗೆದುಹಾಕುವುದಿಲ್ಲವೆಂದು ದೆಹಲಿ ಸಿಇಒ ಸ್ಪಷ್ಟಪಡಿಸಿದ್ದು, ಅಕ್ಟೋಬರ್ 29ರೊಳಗೆ ಪರಿಶೀಲನೆ ಪೂರ್ಣಗೊಂಡು ನವೆಂಬರ್ 4ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ.