
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹೇಮಾವತಿ ನಾಲೆಗೆ ಜಿಗಿದು ನಾಪತ್ತೆಯಾಗಿದ್ದ ನವ ವಿವಾಹಿತೆ ಪ್ರಿಯಾಂಕಾ ಅವರ ಮೃತದೇಹ 11 ದಿನಗಳ ಬಳಿಕ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಕೋಲಾಳ ಗ್ರಾಮದ ಕೆರೆಯಲ್ಲಿ ಪತ್ತೆಯಾಗಿದೆ.
ಸೆಪ್ಟೆಂಬರ್ 19ರ ರಾತ್ರಿ ಪತಿ ಜೊತೆಗಿದ್ದಾಗ ಪ್ರಿಯಾಂಕಾ ನಾಲೆಗೆ ಹಾರಿದ್ದರು ಎನ್ನಲಾಗಿದ್ದು, ಮೃತದೇಹಕ್ಕಾಗಿ ಪೊಲೀಸರು ಮತ್ತು ಸಂಬಂಧಿಕರು ಡ್ರೋನ್ ಬಳಸಿ ಹಾಗೂ ಕಾಲುವೆ ನೀರು ನಿಲ್ಲಿಸಿ ತೀವ್ರ ಶೋಧ ನಡೆಸಿದ್ದರು.
ವರದಕ್ಷಿಣೆ ಕಿರುಕುಳ ನೀಡಿ ಪತಿಯೇ ಕೊಲೆ ಮಾಡಿದ್ದಾನೆ ಎಂದು ಪ್ರಿಯಾಂಕಾ ಪೋಷಕರು ಆರೋಪಿಸಿದ್ದರೆ, ಮತ್ತೊಂದೆಡೆ ಮೊದಲ ಮದುವೆ ವಿಚಾರ ಮುಚ್ಚಿಟ್ಟು ಮದುವೆ ಮಾಡಲಾಗಿದೆ ಎಂದು ಪತಿ ಕಡೆಯವರು ಪ್ರತಿದೂರು ನೀಡಿದ್ದಾರೆ.