
'ರಾಮಾಯಣ' ಸಿನಿಮಾ ನಿರ್ಮಾಣ ಮಾಡುತ್ತಿರುವ ಪ್ರೈಮ್ ಫೋಕಸ್ ಸಂಸ್ಥೆಯ ಮುಖ್ಯಸ್ಥ ನಮಿತ್ ಮಲ್ಹೋತ್ರಾ ಅವರ ಮುಂಬೈ ಕಚೇರಿ ಹಾಗೂ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಸಂಸ್ಥೆಯು ನಡೆಸಿರುವ ವಿದೇಶಿ ಹಣಕಾಸು ವಹಿವಾಟುಗಳು ಹಾಗೂ ವಿದೇಶಿ ಹೂಡಿಕೆಯಲ್ಲಿ ಅಕ್ರಮ ನಡೆದಿದೆಯೆಂಬ ಅನುಮಾನದ ಮೇರೆಗೆ ಈ ಶೋಧ ಕಾರ್ಯ ಮುಂದುವರಿದಿದೆ.
ಐಟಿ ದಾಳಿಯ ಸುದ್ದಿ ಬೆನ್ನಲ್ಲೇ ಪ್ರೈಮ್ ಫೋಕಸ್ ಸಂಸ್ಥೆಯ ಶೇರು ಮೌಲ್ಯವು ಶೇಕಡಾ 8ರಷ್ಟು ಕುಸಿತ ಕಂಡಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.