
ಗುಜರಾತ್ನ ಸೂರತ್ನ ಕತಾರ್ಗಾಮ್ನಲ್ಲಿ ₹30,000 ಸಾಲದ ಹಣ ವಾಪಸ್ ನೀಡದ ಕಾರಣಕ್ಕೆ 54 ವರ್ಷದ ಸಚಿತ್ರ ಕುಮಾರ್ ನರೇಂದ್ರ ಬಾಲ್ ಎಂಬಾತ ತನ್ನ ಸಹೋದ್ಯೋಗಿ ಸಂಜಯ್ ಖೋಸ್ಲಾ ಎಂಬವರನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಆರೋಪಿಯು ಸಂಜಯ್ ಅವರ ತಲೆಯನ್ನು ಕತ್ತರಿಸಿ, ಮೃತದೇಹವನ್ನು ಕ್ರೈಸ್ತ ಸ್ಮಶಾನದ ಒಳಗೆ ಎಸೆದಿದ್ದರೆ, ಕತ್ತರಿಸಿದ ತಲೆಯನ್ನು ಮೂರು ಕಿಲೋಮೀಟರ್ ದೂರದ ರೈಲ್ವೆ ಸೇತುವೆ ಬಳಿ ಎಸೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನವೆಂಬರ್ 3ರಂದು ಸ್ಮಶಾನದಲ್ಲಿ ತಲೆಯಿಲ್ಲದ ಮೃತದೇಹ ಪತ್ತೆಯಾದ ನಂತರ ತನಿಖೆ ನಡೆಸಿದ ಕತಾರ್ಗಾಮ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.