
ನೇಪಾಳ-ಟಿಬೆಟ್ ಗಡಿಯಲ್ಲಿ 17 ಸಾವಿರ ಅಡಿ ಎತ್ತರದಲ್ಲಿದ್ದ 2 ಸಾವಿರ ಅಡಿ ಅಗಲದ ಹಿಮನದಿಯ ತುಂಡು ಕಳಚಿ ಬಿದ್ದಿದ್ದರಿಂದ ಭೀಕರ ಪ್ರವಾಹ ಉಂಟಾಗಿದೆ ಎಂದು ಭೂವಿಜ್ಞಾನಿಗಳು ದೃಢಪಡಿಸಿದ್ದಾರೆ.
ಈ ದುರಂತದಿಂದಾಗಿ 430 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಜಲವಿದ್ಯುತ್ ಸ್ಥಾವರಗಳು ಹೂಳಿನಿಂದ ಮುಚ್ಚಿಹೋಗಿದ್ದು, ನೇಪಾಳ-ಚೀನಾ ಸಂಪರ್ಕಿಸುವ ಐತಿಹಾಸಿಕ ಸ್ನೇಹ ಸೇತುವೆ ಕೊಚ್ಚಿಹೋಗಿದೆ.
ಐಸಿಐಎಂಒಡಿ ವರದಿಯ ಪ್ರಕಾರ, 2000ನೇ ಇಸವಿಯಿಂದ ಹಿಮನದಿಗಳು ಕರಗುವ ವೇಗ ದುಪ್ಪಟ್ಟಾಗಿದ್ದು, ನದಿ ಪಾತ್ರದಲ್ಲಿ ಸೃಷ್ಟಿಯಾಗಿರುವ ಕೃತಕ ಜಲಾಶಯಗಳು ಒಡೆದರೆ ಮತ್ತೊಂದು ಪ್ರವಾಹದ ಭೀತಿ ಎದುರಾಗಿದೆ.