Sports
ಟೀಂ ಇಂಡಿಯಾದ ಮಾಜಿ ವೇಗಿ ಶ್ರೀಶಾಂತ್ ತಂದೆ ನಿಧನ

ಟೀಂ ಇಂಡಿಯಾದ ಮಾಜಿ ವೇಗಿ ಶ್ರೀಶಾಂತ್ ತಂದೆ ನಿಧನ

tv9kannada57m
THE BRIEF
1

ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗಿ ಎಸ್. ಶ್ರೀಶಾಂತ್ ಅವರ ತಂದೆ ವಿ. ಶಾಂತಕುಮಾರನ್ ನಾಯರ್ (89) ಅವರು ಶುಕ್ರವಾರ ತಡರಾತ್ರಿ ಕೊಚ್ಚಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

2

ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

3

ಮೃತದೇಹವನ್ನು ಕೋತಮಂಗಲದಲ್ಲಿರುವ ಕುಟುಂಬದ ಮನೆಗೆ ಕೊಂಡೊಯ್ಯಲಾಗಿದ್ದು, ಸೆಪ್ಟೆಂಬರ್ 13 ರ ಭಾನುವಾರ ಸಂಜೆ 4:00 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.