
ಜಪಾನ್ನ ಐಚಿ-ನಗೋಯಾದಲ್ಲಿ ನಡೆದ ಏಷ್ಯನ್ ಗೇಮ್ಸ್ 2026ರಲ್ಲಿ 21 ಚಿನ್ನ, 27 ಬೆಳ್ಳಿ ಹಾಗೂ 37 ಕಂಚು ಸೇರಿದಂತೆ ಒಟ್ಟು 85 ಪದಕಗಳನ್ನು ಭಾರತ ಗೆದ್ದಿದೆ.
ನವದೆಹಲಿಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪದಕ ವಿಜೇತ ಕ್ರೀಡಾಪಟುಗಳನ್ನು ಭೇಟಿ ಮಾಡಿ ಸಂವಾದ ನಡೆಸಿದ್ದಾರೆ.
ಈ ವೇಳೆ ಕ್ರೀಡಾಪಟುಗಳು ಪ್ರಧಾನಿಯವರಿಗೆ ಸಹಿ ಮಾಡಿದ ಜರ್ಸಿಗಳು, ಹಾಕಿ ಸ್ಟಿಕ್ ಹಾಗೂ ಶಾಲು ಹೊದಿಸಿ ಗೌರವ ಸಲ್ಲಿಸಿದ್ದಾರೆ.