
ಏಷ್ಯನ್ ಗೇಮ್ಸ್ 2026ಕ್ಕೆ ಆಯ್ಕೆಯಾಗಿದ್ದ ಮಾನಸ್ ಧಮ್ನೆ, ಸಹಜಾ ಯಮಲಪಲ್ಲಿ ಸೇರಿದಂತೆ ಐವರು ಟೆನ್ನಿಸ್ ಆಟಗಾರರನ್ನು ಕ್ರೀಡಾ ಸಚಿವಾಲಯ ಕೈಬಿಟ್ಟಿದೆ.
ಸಿಂಗಲ್ಸ್ನಲ್ಲಿ ಟಾಪ್ 6 ಮತ್ತು ಡಬಲ್ಸ್ನಲ್ಲಿ ಟಾಪ್ 8 ಶ್ರೇಯಾಂಕದ ಮಾನದಂಡ ಪೂರೈಸದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಕೈಬಿಡಲಾದ ಆಟಗಾರರ ಪೈಕಿ ಮೂವರು ಮಹಿಳಾ ಆಟಗಾರ್ತಿಯರು ವಿಶ್ವ ಶ್ರೇಯಾಂಕದಲ್ಲಿ ಟಾಪ್ 300ರ ಹೊರಗಿದ್ದು, ಸ್ಪರ್ಧಾತ್ಮಕತೆಯ ಕೊರತೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ.