Economy
ಮಾಲ್ಡೀವ್ಸ್‌ಗೆ ರವಾನೆಯಾಯಿತು ಜಿಐ ಟ್ಯಾಗ್ ಪಡೆದ ಕಲಬುರಗಿ ತೊಗರಿ ಬೇಳೆ

ಮಾಲ್ಡೀವ್ಸ್‌ಗೆ ರವಾನೆಯಾಯಿತು ಜಿಐ ಟ್ಯಾಗ್ ಪಡೆದ ಕಲಬುರಗಿ ತೊಗರಿ ಬೇಳೆ

prajavani1d
THE BRIEF
1

ಕಲಬುರಗಿ ಜಿಲ್ಲೆಯ ಜಿಐ ಟ್ಯಾಗ್ ಮಾನ್ಯತೆ ಪಡೆದ ಒಂದು ಟನ್ ತೊಗರಿ ಬೇಳೆಯನ್ನು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು (APEDA) ಮಾಲ್ಡೀವ್ಸ್‌ಗೆ ರವಾನಿಸಿದೆ.

2

ಮೈಸೂರಿನ ಸಿಲ್ಕನ್‌ ಗೋಬಲ್‌ ಎಕ್ಸ್‌ಪೋರ್ಟ್‌ ಅಂಡ್‌ ಇಂಪೋರ್ಟ್‌ ಸಂಸ್ಥೆಯು ಸಮುದ್ರದ ಮೂಲಕ ಈ ಬೇಳೆಯನ್ನು ಕಳುಹಿಸಿಕೊಟ್ಟಿದೆ.

3

ಈ ರಫ್ತು ಪ್ರಕ್ರಿಯೆಯು ರೈತರಿಗೆ ಪ್ರಸ್ತುತ ಮಾರುಕಟ್ಟೆ ಬೆಲೆಗಿಂತ ಶೇ 30ಕ್ಕಿಂತ ಹೆಚ್ಚು ಲಾಭವನ್ನು ಒದಗಿಸಲಿದೆ ಎಂದು ರಫ್ತು ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.