ಕೊಯಮತ್ತೂರಿನಲ್ಲಿ ನಡೆಯುತ್ತಿರುವ 16ನೇ ಹಾಕಿ ಇಂಡಿಯಾ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವು ಉತ್ತರ ಪ್ರದೇಶದ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಸೋಲು ಕಂಡಿದೆ.
ಪಂದ್ಯದ 13ನೇ ನಿಮಿಷದಲ್ಲಿ ನಿತೇಶ್ ಶರ್ಮಾ ಕರ್ನಾಟಕಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರೂ, ದ್ವಿತೀಯಾರ್ಧದಲ್ಲಿ ಉತ್ತರ ಪ್ರದೇಶದ ಆಟಗಾರರು ಮೂರು ಗೋಲುಗಳನ್ನು ಗಳಿಸಿ ಜಯ ಸಾಧಿಸಿದರು.
ಉತ್ತರ ಪ್ರದೇಶದ ಪರ ತ್ರಿಲೋಕಿ ವೆನವಂಶಿ, ನೀರಜ್ ಪ್ರಜಾಪತಿ ಮತ್ತು ರಿತೇಶ್ ಪಾಂಡೆ ತಲಾ ಒಂದು ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.