
ಜಾಗತಿಕ ತಂತ್ರಜ್ಞಾನ ದೈತ್ಯ ಆಪಲ್ ಸಂಸ್ಥೆಯ ಪ್ರೀಮಿಯಂ ಸ್ಮಾರ್ಟ್ಫೋನ್ಗಳಾದ ಐಫೋನ್ 18 ಪ್ರೊ ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ ಮಾರುಕಟ್ಟೆಯಲ್ಲಿ ಹಿನ್ನಡೆ ಅನುಭವಿಸುತ್ತಿದ್ದು, ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಉತ್ಪಾದನೆಯನ್ನು ಶೇಕಡಾ 15 ರಿಂದ 20ರಷ್ಟು ಕಡಿತಗೊಳಿಸುವಂತೆ ಕಂಪನಿಯು ಸೂಚಿಸಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ 18 ಪ್ರೊ ಆರಂಭಿಕ ಬೆಲೆ 1,64,900 ರೂಪಾಯಿಗಳಾಗಿದ್ದರೆ, ಪ್ರೊ ಮ್ಯಾಕ್ಸ್ ಬೆಲೆ 1,79,900 ರೂಪಾಯಿಗಳಿಂದ ಶುರುವಾಗುತ್ತದೆ ಎಂದು ನಿಕ್ಕಿ ಏಷ್ಯಾ ವರದಿ ಮಾಡಿದೆ.
ಕೃತಕ ಬುದ್ಧಿಮತ್ತೆ ಡೇಟಾ ಸೆಂಟರ್ಗಳ ವಿಸ್ತರಣೆಯಿಂದ ಮೆಮೊರಿ ಚಿಪ್ ಬೆಲೆ ಏರಿಕೆಯಾಗಿದ್ದು, ಭಾರತದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತವೂ ಸ್ಮಾರ್ಟ್ಫೋನ್ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.