
ಯುನೈಟೆಡ್ ಕಿಂಗಡಮ್ ಮೂಲದ ಜಾಗತಿಕ ಸಂಸ್ಥೆಯಾದ ಮಾರ್ಟಿನ್-ಬೇಕರ್ ಕಂಪನಿಯು ಸೇನಾ ವಿಮಾನಗಳ ಎಜೆಕ್ಷನ್ ಸೀಟುಗಳು ಹಾಗೂ ಸುರಕ್ಷಾ ಸಾಧನಗಳ ತಯಾರಿಕಾ ಸ್ಥಾವರ ನಿರ್ಮಾಣಕ್ಕಾಗಿ ಕರ್ನಾಟಕದಲ್ಲಿ ₹380 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದ 5ನೇ ಹಂತದಲ್ಲಿ 10 ಎಕರೆ ಜಾಗವನ್ನು ಕೋರಿರುವ ಈ ಕಂಪನಿಯು ಉನ್ನತ ಮಟ್ಟದ ಕೌಶಲ್ಯ ಬೇಡುವ 500ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ.
ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವ ಸಾಧನಗಳನ್ನು ತಯಾರಿಸುವ ಮತ್ತೊಂದು ಸಂಸ್ಥೆಯಾದ ಟಾನ್ಬೋ ಇಮೇಜಿಂಗ್ ಇಂಡಿಯಾ ಲಿಮಿಟೆಡ್ ಕೂಡ ಬೆಂಗಳೂರಿನಲ್ಲಿ 5 ಎಕರೆ ಹಾಗೂ ವಿಜಯಪುರ ಜಿಲ್ಲೆಯ ಮುಳವಾಡದಲ್ಲಿ 130 ಎಕರೆ ಜಾಗವನ್ನು ಕೇಳಿದೆ.