
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ಮೂವರು ಗುತ್ತಿಗೆದಾರರಿಗೆ ಒಟ್ಟು 13,00,753 ರೂಪಾಯಿ ದಂಡ ವಿಧಿಸಲಾಗಿದೆ.
ಸಹಾಯ ಆ್ಯಪ್ನಲ್ಲಿ ಸೆಪ್ಟೆಂಬರ್ 1ರಿಂದ 23ರವರೆಗೆ ದಾಖಲಾದ ಸಾರ್ವಜನಿಕ ದೂರುಗಳು ಮತ್ತು ರಾತ್ರಿ ವೇಳೆ ನಡೆಸಿದ ತಪಾಸಣೆಯಿಂದ ಬೀದಿದೀಪಗಳು ಬೆಳಗದಿರುವುದು ಬೆಳಕಿಗೆ ಬಂದಿದೆ.
ಸ್ಪೆಕ್ಟ್ರಮ್ ಟೂಲ್ ಇಂಜಿನಿಯರ್ಸ್ಗೆ 9.56 ಲಕ್ಷ ರೂ., ಎಫಿಲೂಮ್ಗೆ 3.29 ಲಕ್ಷ ರೂ. ಹಾಗೂ ಟ್ರಾನ್ಸ್ಗ್ಲೋಬಲ್ಗೆ 14,599 ರೂ. ದಂಡ ವಿಧಿಸಲಾಗಿದ್ದು, ಲೋಪ ಮುಂದುವರಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದೆ.